ಬಾಲಕಾಂಡ - ಸರ್ಗ ೪

 ||ಅನುಕ್ರಮಣಿಕಾ||


ಪ್ರಾಪ್ತರಾಜ್ಯಸ್ಯ ರಾಮಸ್ಯ ವಾಲ್ಮೀಕಿರ್ಭಗವಾನೃಷಿಃ |
ಚಕಾರ ಚರಿತಂ ಕೃತ್ಸ್ನಂ ವಿಚಿತ್ರಪದಮಾತ್ಮವಾನ್  ||4.1||
ಇನ್ನಷ್ಟು ಓದಿ......
ಶಬ್ದಾರ್ಥ: ಪ್ರಾಪ್ತರಾಜ್ಯಸ್ಯ=ರಾಜ್ಯವು ಸಿಕ್ಕ; ರಾಮಸ್ಯ=ರಾಮನ;  ವಾಲ್ಮೀಕಿಃ ಭಗವಾನ್ ಋಷಿಃ=ಭಗವಾನ್ ವಾಲ್ಮೀಕಿಯ; ಚಕಾರ=ರಚಿಸಿದನು; ಚರಿತಂ=ಕತೆಯನ್ನು; ಕೃತ್ಸ್ನಂ=ಸಂಪೂರ್ಣವಾಗಿ; ವಿಚಿತ್ರಪದಮ್=ಶ್ಲಾಘನೀಯ ಶಬ್ದಗಳಿಂದ ಕೂಡಿದ 
ಅನುವಾದ:ಆಧ್ಯಾತ್ಮಿಕ ದೃಷ್ಟಿ ಸಂಪನ್ನನಾದ ಋಷಿ ವಾಲ್ಮೀಕಿ, ತನ್ನ ರಾಜ್ಯವನ್ನು ಮರಳಿ ಪಡೆದ ಶ್ರೀರಾಮನ ಸಂಪೂರ್ಣ ವೃತ್ತಾಂತವನ್ನು ಅತ್ಯಂತ ವೈವಿಧ್ಯಮಯ ಹಾಗೂ ಅದ್ಭುತವಾದ ಪದ್ಯಗಳಿಂದ ರಚಿಸಿದನು.
  ♦
 
ಚತುರ್ವಿಂಶತ್ಸಹಸ್ರಾಣಿ ಶ್ಲೋಕನಾಮುಕ್ತವಾನೃಷಿಃ |
ತಥಾ ಸರ್ಗಶತಾನ್ಪಂಚ ಷಟ್ಕಾಂಡಾನಿ ತಥೋತ್ತರಮ್  ||4.2||
ಇನ್ನಷ್ಟು ಓದಿ......
ಶಬ್ದಾರ್ಥ:  ಚತುರ್ವಿಂಶತ್ ಸಹಸ್ರಾಣಿ=ಇಪ್ಪತ್ತನಾಲ್ಕು ಸಾವಿರ; ಶ್ಲೋಕಾನಾಮ್=ಶ್ಲೋಕಗಳನ್ನು; ಉಕ್ತವಾನ್=ಹೇಳಿದನು; ಋಷಿಃ=ಋಷಿ; ತಥಾ=ಹಾಗೆಯೇ; ಸರ್ಗಶತಾನ್ ಪಂಚ=ಐದುನೂರು ಸರ್ಗಗಳನ್ನು; ಷಟ್ಕಾಂಡಾನಿ=ಆರು ಕಾಂಡಗಳನ್ನು; ತಥಾ=ಹಾಗೆಯೇ; ಉತ್ತರಮ್=ಉತ್ತರಕಾಂಡವನ್ನು;
ಅನುವಾದ:  .ವಾಲ್ಮೀಕಿ ಋಷಿಯು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳನ್ನು ಹೇಳಿದನು, ಅವುಗಳನ್ನು ಐದು ನೂರು ಸರ್ಗಗಳಾಗಿ  ಹಾಗೂ ಆರು ಕಾಂಡಗಳಾಗಿ ವಿಂಗಡಿಸಿದನು. ಅದಲ್ಲದೇ  ಉತ್ತರ ರಾಮಾಯಣವನ್ನೂ ರಚಿಸಿದನು.
  ♦
 
ಕೃತ್ವಾಪಿ ತನ್ಮಹಾಪ್ರಾಜ್ಞಃ ಸಭವಿಷ್ಯಂ ಸಹೋತ್ತರಮ್ |
ಚಿಂತಯಾಮಾಸ ಕೋ ನ್ವೇತತ್ಪ್ರಯುಂಜೀಯಾದಿತಿ ಪ್ರಭುಃ   ||4.3||
ಇನ್ನಷ್ಟು ಓದಿ......
ಶಬ್ದಾರ್ಥ:  ಕೃತ್ವಾ ಅಪಿ=ರಚಿಸಿದರೂ; ತತ್ =ಅದನ್ನು; ಮಹಾಪ್ರಾಜ್ಞಃ=ಮಹಾಜ್ಞಾನಿಯು; ಸಭವಿಷ್ಯಂ=ಭವಿಷ್ಯದೊಡನೆ; ಸಹ ಉತ್ತರಮ್=ಉತ್ತರ ಭಾಗದ ಜೊತೆ; ಚಿಂತಯಾಮಾಸ=ಯೋಚಿಸಿದದನು; ಕಃ=ಯಾರು; ನು=ನಿಜವಾಗಿಯೂ; ಏತತ್=ಇದನ್ನು; ಪ್ರಯುಂಜೀಯಾತ್=ವಾಚನ ಮಾಡುವರು; ಇತಿ=ಹೀಗೆಂದು; ಪ್ರಭುಃ=ಪ್ರಭುವು, ವಾಲ್ಮೀಕಿಯು
ಅನುವಾದ: ಆ ಕೃತಿಯನ್ನು ಉತ್ತರ ಭಾಗವನ್ನು ಸಹ ಗಮನದಲ್ಲಿಟ್ಟುಕೊಂಡು ರಚಿಸಿದ ನಂತರ ದೂರದೃಷ್ಟಿಯುಳ್ಳ ಆ ಋಷಿಯು ಹೀಗೆ ಯೋಚಿಸಿದನು: "ಇದನ್ನು ಯಾರು ತಾನೇ ಸಮರ್ಪಕವಾಗಿ ನಿರೂಪಿಸಬಲ್ಲರು?"
  ♦
 
ತಸ್ಯ ಚಿಂತಯಮಾನಸ್ಯ ಮಹರ್ಷೇರ್ಭಾವಿತಾತ್ಮನಃ|
ಅಗೃಹ್ಣೀತಾಂ ತತಃ ಪಾದೌ ಮುನಿವೇಷೌ ಕುಶೀಲವೌ ||4.4||
ಇನ್ನಷ್ಟು ಓದಿ......
ಶಬ್ದಾರ್ಥ:  ತಸ್ಯ=ಅವನ; ಚಿಂತಯಮಾನಸ್ಯ=ಯೋಚಿಸುತ್ತಿರುವವನ; ಮಹರ್ಷೇಃ=ಮಹರ್ಷಿಯ; ಭಾವಿತ ಆತ್ಮನಃ=ಚಿಂತನೆ ಮಾಡುತ್ತಿರುವವನ; ಅಗೃಹ್ಣೀತಾಂ=ಸ್ಪರ್ಶಿಸಿದರು; ತತಃ=ಅಲ್ಲಿ; ಮುನಿವೇಷೌ=ಮುನಿವಸ್ತ್ರಗಳನ್ನು ಧರಿಸಿದ; ಕುಶಿಲವೌ=ಲವಕುಶರು;
ಅನುವಾದ: .ಶಾಂತಚಿತ್ತರಾದ ಮಹರ್ಷಿ ವಾಲ್ಮೀಕಿಯವರು ಈ ಆಲೋಚನೆಯಲ್ಲಿ ಮಗ್ನರಾಗಿದ್ದಾಗ, ತಪಸ್ವಿಗಳ ವೇಷ ಧರಿಸಿದ್ದ ಕುಶ ಮತ್ತು ಲವರು ಅವರ ಬಳಿಗೆ ಬಂದು, ಭಕ್ತಿಯಿಂದ ಅವರ ಪಾದಗಳನ್ನು ಸ್ಪರ್ಶಿಸಿದರು.
  ♦
 
ಕುಶೀಲವೌ ತು ಧರ್ಮಜ್ಞೌ ರಾಜಪುತ್ರೌ ಯಶಸ್ವಿನೌ |
ಭ್ರಾತರೌ ಸ್ವರಸಂಪನ್ನೌ ದದರ್ಶಾಶ್ರಮವಾಸಿನೌ  ||4.5||
ಇನ್ನಷ್ಟು ಓದಿ......
ಶಬ್ದಾರ್ಥ:  ಕುಶೀಲವೌ=ಕುಶ-ಲವರು; ತು=ಆದರೆ; ಧರ್ಮಜ್ಞೌ=ಧರ್ಮಜ್ಞರು, ಧರ್ಮ ತಿಳಿದವರು; ರಾಜಪುತ್ರೌ=ರಾಜಪುತ್ರರು; ಯಶಸ್ವಿನೌ=ಯಶಸ್ವಿಗಳು; ಭ್ರಾತರೌ=ಸಹೇೋದರರು;  ಸ್ವರಸಂಪನ್ನೌ =ಇಂಪಾದ ಸ್ವರ ಹೊಂದಿದವರು; ದದರ್ಶ=ನೋಡಿದನು;  ಆಶ್ರಮವಾಸಿನೌ =ಆಶ್ರಮವಾಸಿಗಳು; 
ಅನುವಾದ: ಆ ಋಷಿಯು ಆಶ್ರಮದಲ್ಲಿ ವಾಸಿಸುತ್ತಿದ್ದ ಕುಶ ಮತ್ತು ಲವ ಎಂಬ ಧರ್ಮಜ್ಞರೂ, ಮಧುರ ಕಂಠವುಳ್ಳವರೂ ಹಾಗೂ ಪ್ರಖ್ಯಾತ ರಾಜಕುಮಾರರೂ ಆದ ಸಹೋದರರನ್ನು ಕಂಡನು.
 
  ♦
 
ಸ ತು ಮೇಧಾವಿನೌ ದೃಷ್ಟ್ವಾ ವೇದೇಷು ಪರಿನಿಷ್ಠಿತೌ  |
ವೇದೋಪಬ್ರಹ್ಮಣಾರ್ಥಾಯ ತಾವಗ್ರಾಹಯತ ಪ್ರಭುಃ  ||4.6||
ಇನ್ನಷ್ಟು ಓದಿ......
ಶಬ್ದಾರ್ಥ:  ಸಃ=ಅವನು(ವಾಲ್ಮೀಕಿ); ತು=ಆದರೆ; ಮೇಧಾವಿನೌ=ಮೇಧಾವಿಗಳನ್ನು;  ದೃಷ್ಟ್ವಾ =ನೋಡಿ; ವೇದೇಷು=ವೇದಗಳಲ್ಲಿ; ಪರಿನಿಷ್ಠಿತೌ=ನಿಪುಣರನ್ನು; ವೇದೋಪಬ್ರಹ್ಮಣಾರ್ಥಾಯ=ವೇದಗಳ ಪೋಷಣೆಗಾಗಿ; ತೌ=ಅವರನ್ನು; ಅಗ್ರಾಹಯತ=ನೀಡಿದನು, ಕಂಠಪಾಠ ಮಾಡಿಸಿದನು
ಅನುವಾದ: ಅವರಿಬ್ಬರೂ ಬುದ್ಧಿವಂತರು ಹಾಗೂ ವೇದಜ್ಞಾನದಲ್ಲಿ ನಿಪುಣರನ್ನು ಎಂದು ಕಂಡ ವಾಲ್ಮೀಕಿಯು, ಈ ಕೃತಿಯು(ರಾಮಾಯಣವು) ವೇದಗಳಿಗೆ ಪೂರಕವಾಗಿ ಮತ್ತು ಅವುಗಳನ್ನು ಸಮೃದ್ಧಗೊಳಿಸಲೆಂಬ ಉದ್ದೇಶದಿಂದ ಅವರಿಗೆ ರಾಮಾಯಣವನ್ನು ಕಲಿಸಿದನು.
 
  ♦
 
ಕಾವ್ಯಂ ರಾಮಾಯಣಂ ಕೃತ್ಸ್ನಂ ಸೀತಾಯಾಶ್ಚರಿತಂ ಮಹತ್|
ಪೌಲಸ್ತ್ಯವಧಮಿತ್ಯೇವ ಚಕಾರ ಚರಿತವ್ರತಃ  ||4.6||
ಇನ್ನಷ್ಟು ಓದಿ......
ಶಬ್ದಾರ್ಥ:  ಕಾವ್ಯಂ=ಕಾವ್ಯವನ್ನು; ರಾಮಾಯಣಂ=ರಾಮಾಯಣವನ್ನು; ಕೃತ್ಸ್ನಂ=ಸಂಪೂರ್ಣವಾಗಿ; ಸೀತಾಯಾಃ=ಸೀತೆಯ; ಚರಿತಂ=ಕತೆಯನ್ನು; ಮಹತ್=ಶ್ರೇಷ್ಠವಾದ; ಪೌಲಸ್ತ್ಯವಧಂ=ರಾವಣನ ವಧೆಯನ್ನು; ಇತಿ =ಹೀಗೆ;  ಏವ ಚಕಾರ=ಹೀಗೆ ರಚಿಸಿದನು; ಚರಿತ ವ್ರತಃ=ವ್ರತವನ್ನು ಆಚರಿಸುವ ವಾಲ್ಮೀಕಿಯು 
ಅನುವಾದ:  
-----ಇನ್ನೂ ಇದೆ------

Comments

Popular posts from this blog

ಬಾಲಕಾಂಡ - ಸರ್ಗ ೧

ಬಾಲಕಾಂಡ - ಸರ್ಗ ೨

ಬಾಲಕಾಂಡ - ಸರ್ಗ ೩