Posts

Showing posts from November, 2026

ಬಾಲಕಾಂಡ - ಸರ್ಗ ೪

 ||ಅನುಕ್ರಮಣಿಕಾ|| ಪ್ರಾಪ್ತರಾಜ್ಯಸ್ಯ ರಾಮಸ್ಯ ವಾಲ್ಮೀಕಿರ್ಭಗವಾನೃಷಿಃ | ಚಕಾರ ಚರಿತಂ ಕೃತ್ಸ್ನಂ ವಿಚಿತ್ರಪದಮಾತ್ಮವಾನ್  ||4.1|| ಇನ್ನಷ್ಟು ಓದಿ...... ಶಬ್ದಾರ್ಥ:  ಪ್ರಾಪ್ತರಾಜ್ಯಸ್ಯ=ರಾಜ್ಯವು ಸಿಕ್ಕ; ರಾಮಸ್ಯ=ರಾಮನ;  ವಾಲ್ಮೀಕಿಃ ಭಗವಾನ್ ಋಷಿಃ=ಭಗವಾನ್ ವಾಲ್ಮೀಕಿಯ; ಚಕಾರ=ರಚಿಸಿದನು; ಚರಿತಂ=ಕತೆಯನ್ನು; ಕೃತ್ಸ್ನಂ=ಸಂಪೂರ್ಣವಾಗಿ; ವಿಚಿತ್ರಪದಮ್=ಶ್ಲಾಘನೀಯ ಶಬ್ದಗಳಿಂದ ಕೂಡಿದ  ಅನುವಾದ: ಆಧ್ಯಾತ್ಮಿಕ ದೃಷ್ಟಿ ಸಂಪನ್ನನಾದ ಋಷಿ ವಾಲ್ಮೀಕಿ, ತನ್ನ ರಾಜ್ಯವನ್ನು ಮರಳಿ ಪಡೆದ ಶ್ರೀರಾಮನ ಸಂಪೂರ್ಣ ವೃತ್ತಾಂತವನ್ನು ಅತ್ಯಂತ ವೈವಿಧ್ಯಮಯ ಹಾಗೂ ಅದ್ಭುತವಾದ ಪದ್ಯಗಳಿಂದ ರಚಿಸಿದನು.   ♦   ಚತುರ್ವಿಂಶತ್ಸಹಸ್ರಾಣಿ ಶ್ಲೋಕನಾಮುಕ್ತವಾನೃಷಿಃ | ತಥಾ ಸರ್ಗಶತಾನ್ಪಂಚ ಷಟ್ಕಾಂಡಾನಿ ತಥೋತ್ತರಮ್  ||4.2|| ಇನ್ನಷ್ಟು ಓದಿ...... ಶಬ್ದಾರ್ಥ:   ಚತುರ್ವಿಂಶತ್ ಸಹಸ್ರಾಣಿ=ಇಪ್ಪತ್ತನಾಲ್ಕು ಸಾವಿರ; ಶ್ಲೋಕಾನಾಮ್=ಶ್ಲೋಕಗಳನ್ನು; ಉಕ್ತವಾನ್=ಹೇಳಿದನು; ಋಷಿಃ=ಋಷಿ; ತಥಾ=ಹಾಗೆಯೇ; ಸರ್ಗಶತಾನ್ ಪಂಚ=ಐದುನೂರು ಸರ್ಗಗಳನ್ನು; ಷಟ್ಕಾಂಡಾನಿ=ಆರು ಕಾಂಡಗಳನ್ನು; ತಥಾ=ಹಾಗೆಯೇ; ಉತ್ತರಮ್=ಉತ್ತರಕಾಂಡವನ್ನು; ಅನುವಾದ:   .ವಾಲ್ಮೀಕಿ ಋಷಿಯು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳನ್ನು ಹೇಳಿದನು, ಅವುಗಳನ್ನು ಐದು ನೂರು ಸರ್ಗಗಳಾಗಿ  ಹಾಗೂ ಆರು ಕಾಂಡಗಳಾಗಿ ವಿಂಗಡಿ...