Posts

Showing posts from September, 2026

ಬಾಲಕಾಂಡ - ಸರ್ಗ ೨

Image
  ನಾರದಸ್ಯ ತು ತದ್ವಾಕ್ಯಂ ಶ್ರುತ್ವಾ ವಾಕ್ಯ ವಿಶಾರದಃ  |  ಪೂಜಯಾಮಾಸ ಧರ್ಮಾತ್ಮಾ ಸಹಶಿಷ್ಯೋ ಮಹಾಮುನಿಃ ||2.1|| ಇನ್ನಷ್ಟು ಓದಿ...... ಅನ್ವಯ : ನಾರದಸ್ಯ ತು ತತ್ ವಾಕ್ಯಂ ಶ್ರುತ್ವಾ  ವಾಕ್ಯವಿಶಾರದಃ ಮಹಾಮುನಿಃ ಧರ್ಮಾತ್ಮಾ ಸಹಶಿಷ್ಯಃ ಪೂಜಯಾಮಾಸ. ಶಬ್ದಾರ್ಥ : ನಾರದಸ್ಯ=ನಾರದನ; ತು=ಆದರೆ; ತತ್ = ಆ; ವಾಕ್ಯಂ=ವಾಕ್ಯವನ್ನು; ಶ್ರುತ್ವಾ=ಕೇಳಿ;  ವಾಕ್ಯವಿಶಾರದಃ=ವಾಕ್ಯನಿಪುಣನು; ಮಹಾಮುನಿಃ=ಮಹಾಮುನಿಯು; ಧರ್ಮಾತ್ಮಾ=ಧರ್ಮಾತ್ಮನು; ಸಹಶಿಷ್ಯಃ=ಶಿಷ್ಯರ ಜೊತೆ; ಪೂಜಯಾಮಾಸ=ಪೂಜೆ ಮಾಡಿದನು ಅನುವಾದ :  ನಾರದನ ಆ ಮಾತುಗಳನ್ನು ಕೇಳಿದ ವಾಕ್ಯವಿಶಾರದ ಹಾಗೂ ಧರ್ಮಾತ್ಮನಾದ ಮಹಾಮುನಿ ವಾಲ್ಮೀಕಿಯು ತನ್ನ ಶಿಷ್ಯರ ಜೊತೆಗೂಡಿ ವಾಲ್ಮೀಕಿಯನ್ನು ಪೂಜಿಸಿದನು. ♦ ♦ ಯಥಾವತ್ಪೂಜಿತಸ್ತೇನ ದೇವರ್ಷಿರ್ನಾರದಸ್ತಥಾ| ಅಪೃಚ್ಛ್ಯೈವಾಭ್ಯನುಜ್ಞಾತಃ ಸ ಜಗಾಮ ವಿಯಾಸಮ್||2.2|| ಇನ್ನಷ್ಟು ಓದಿ...... ಅನ್ವಯ: ತೇನ ಯಥಾವತ್ ಪೂಜಿತಃ ದೇವರ್ಷಿಃ ನಾರದಃ ತದಾ ಅಪೃಚ್ಛ ಏವ ಅಭ್ಯನುಜ್ಞಾತಃ ಸಃ ವಿಯಾಸಮ್ ಜಗಾಮ. ಶಬ್ದಾರ್ಥ: ತೇನ=ಅವನಿಂದ; ಯಥಾವತ್=ಯಥಾವತ್; ಪೂಜಿತಃ=ಪೂಜಿಸಲ್ಪಟ್ಟು; ದೇವರ್ಷಿಃ=ದೇವರ್ಷಿ; ನಾರದಃ =ನಾರದನು; ತದಾ=ಆಗ; ಅಪೃಚ್ಛಏವ=ಕೇಳಿಯೇ; ಅಭ್ಯನುಜ್ಞಾತಃ=ಅಪ್ಪಣೆ ಪಡೆದು; ಸಃ=ಅವನು; ವಿಯಾಸಮ್=ಸ್ವರ್ಗಕ್ಕೆ; ಜಗಾಮ=ಹೋದನು ಅನುವಾದ: ಆಗ ದೇವರ್ಷಿ ನಾರದನು ವಾಲ್ಮೀಕಿಯಿಂದ ಯಥಾವತ್ತಾಗಿ ಪೂಜಿಸಲ...

ಬಾಲಕಾಂಡ - ಸರ್ಗ ೧

Image
ವಾಲ್ಮೀಕಿ ವಿರಚಿತ ರಾಮಯಾಣದ ಕೆಲವು ಭಾಗಗಳನ್ನು ನನಗೆ ಅರ್ಥ ಆದಷ್ಟು ಅನುವಾದಿಸಲು ಪ್ರಯತ್ನ ಮಾಡುತ್ತಿದ್ದೇನೆ. ಉಪನಿಷತ್ತುಗಳು ಇತ್ಯಾದಿ ತತ್ವಜ್ಞಾನದ ಕೃತಿಗಳ ನಂತರ ಇದು ಸ್ವಲ್ಪ ಸುಲಭ ಎನಿಸುತ್ತಿದೆ. ಭಾಷೆ ಸರಳವಾಗಿದೆ.  ಬಾಲಕಾಂಡದ ಈ ಮೊದಲನೆಯ ಸರ್ಗವನ್ನು 'ಸಂಕ್ಷಿಪ್ತ ರಾಮಾಯಣ' ಎಂದೂ ಹೇಳುತ್ತಾರೆ. ಇದರಲ್ಲಿ ನಾರದ ಋಷಿಯು ವಾಲ್ಮೀಕಿಗೆ ರಾಮಾಯಣದ ಕತೆಯನ್ನು ಹೇಳುತ್ತಾನೆ. ವಾಲ್ಮೀಕಿ "ಸರ್ವಶ್ರೇಷ್ಠನಾದ ವ್ಯಕ್ತಿ ಜಗತ್ತಿನಲ್ಲಿ ಯಾರು?" ಎಂದು ಕೇಳಿದಾಗ ನಾರದನು ರಾಮನೆಂದು ಹೇಳಿ ಅವನ ಗುಣಗಳನ್ನು ವರ್ಣಿಸಿ ನಂತರ ರಾಮನ ಕತೆಯನ್ನು ಹೇಳುತ್ತಾನೆ.   ಬಾಲಕಾಂಡ - ಸರ್ಗ ೧    ತಪಸ್ವಾಧ್ಯಾಯ ನಿರತಂ ತಪಸ್ವೀ ವಾಗ್ವಿದಾಂ ವರಂ ನಾರದಂ ಪರಿಪ್ರಪಚ್ಛ ವಾಲ್ಮೀಕಿರ್ಮುನಿಪುಂಗವಂ||1.1|| ಇನ್ನಷ್ಟು ಓದಿ......  ಅನ್ವಯ: ತಪಸ್ವೀ ವಾಲ್ಮೀಕಿಃ ತಪಃ ಸ್ವಾಧ್ಯಾಯ ನಿರತಂ ವಾಗ್ವಿದಂ ವರಂ ಮುನಿಪುಂಗವಂ ನಾರದಂ ಪರಿಪ್ರಪಚ್ಛ. ಶಬ್ದಾರ್ಥ: ಸ್ವಾಧ್ಯಾಯ ನಿರತಂ=ಸ್ವ ಅಧ್ಯಯನದಲ್ಲಿ ನಿರತನಾದ; ವರಂ=ಶ್ರೇಷ್ಠನಾದವನನ್ನು;ನಾರದಂ=ನಾರದನನ್ನು; ಪರಿಪ್ರಪಚ್ಛ=ಕೇಳಿದನು; ಮುನಿಪುಂಗವಂ=ಮುನಿಶ್ರೇಷ್ಠನನ್ನು ಅನುವಾದ: ತಪಸ್ವಿ ವಾಲ್ಮೀಕಿಯು ತಪ, ಸ್ವಾಧ್ಯಾಯದಲ್ಲಿ ನಿರತನಾದ ಶ್ರೇಷ್ಠನಾದ, ಮುನಿಪುಂಗವನಾದ ವಾಲ್ಮೀಕಿಯನ್ನು ಕೇಳಿದನು. ♦ ಕೋऽನ್ವಸ್ಮನ್ಸಾಂಪ್ರತಂ ಲೋಕೇ ಗುಣವಾನ್ ಕಶ್ಚ ವೀರ್ಯವಾನ್| ಧರ್ಮಜ್ಞಶ್ಚ ಕೃ...