ಬಾಲಕಾಂಡ - ಸರ್ಗ ೩
ರಾಮಾಯಣದ ಈ ೩ನೇ ಸರ್ಗದಲ್ಲಿ ಮಹಾಕಾವ್ಯದ ರಚನೆಯ ರೂಪುರೇಷೆಗಳನ್ನು ವಿವರಿಸಲಾಗಿದೆ. ಮಹರ್ಷಿ ವಾಲ್ಮೀಕಿ ಈ ಮಹಾಕಾವ್ಯದ ಪ್ರಮುಖ ಘಟ್ಟಗಳ ನಿರೂಪಣೆಯನ್ನು ಹೇಗೆ ಯೋಜಿಸಿದರು ಎಂಬುದನ್ನು ಒಳಗೊಂಡಂತೆ, ಇಡೀ ಕಾವ್ಯದ ಸಾರಾಂಶವನ್ನು ಇದರಲ್ಲಿ ಪ್ರಸ್ತುತಪಡಿಸಲಾಗಿದೆ. ♦ ಶ್ರುತ್ವಾ ವಸ್ತು ಸಮಗ್ರಂ ತದ್ಧರ್ಮಾತ್ಮಾ ಧರ್ಮಸಂಹಿತಮ್| ವ್ಯಕ್ತಮನ್ವೇಷತೇ ಭೂಯೋ ಯದ್ವೃತ್ತಂ ಧೀಮತಃ ||3.1|| ಇನ್ನಷ್ಟು ಓದಿ...... ಶಬ್ದಾರ್ಥ: ಶ್ರುತ್ವಾ=ಕೇಳಿ; ವಸ್ತು ಸಮಗ್ರಂ=ಸಂಪೂರ್ಣ ವೃತ್ತಾಂತವನ್ನು; ತತ್=ಅದು; ಧರ್ಮಾತ್ಮಾ =ಧರ್ಮಾತ್ಮನು; ಧರ್ಮಸಂಹಿತಮ್=ಧರ್ಮಸಂಹಿತವಾದ; ವ್ಯಕ್ತಮ್=ತಿಳಿದಿದ್ದನ್ನು; ಅನ್ವೇಷತೇ=ಹುಡುಕುತ್ತ; ಭೂಯಃ=ಆದನು; ಯತ್=ಯಾವುದು; ವೃತ್ತಂ=ನಡೆದಿರುವದನ್ನು; ಧೀಮತಃ=ಜ್ಞಾನಿಯು ಅನುವಾದ: ನಾರದ ಮುನಿಗಳಿಂದ ಸತ್ಯ, ಸಮೃದ್ಧಿ ಮತ್ತು ಶುಭದಾಯಕ ರಾಮಾಯಣದ ಸಾರವನ್ನು ಕೇಳಿದ ಆ ಸದ್ಗುಣಶೀಲ ವಾಲ್ಮೀಕಿ, ಆ ಕುಶಲ ರಾಮನ ಕಥೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಹುಡುಕಲು ಪ್ರಾರಂಭಿಸಿದನು. ♦ ಉಪಸ್ವೃಶ್ಯೋದಕಂ ಸಮ್ಯಙ್ಮುನಿಃ ಸ್ಥಿತ್ವಾ ಕೃತಾಂಜಲಿಃ| ಪ್ರಾಚೀನಾಗ್ರೇಷು ದರ್ಭೇಷು ಧರ್ಮೇಣಾನ್ವೇಷತೇ ಗತಿಮ್ ||3.2|| ಇನ್ನಷ್ಟು ಓದಿ...... ಶಬ್ದಾರ್ಥ: ಉಪಸ್ಪೃಶ್ಯ=ಮುಟ್ಟಿ, ಆಚಮನ ಮಾಡಿ; ಉದಕಂ=ನೀರನ್ನು; ಸಮ್ಯಕ್=ಚೆನ್ನಾಗಿ; ಮುನಿಃ=ಮುನಿಯು; ಸ್ಥಿತ್ವಾ =ನಿಂತು; ಕೃತಾಂಜಲಿಃ=ಕೈ ಮುಗಿದು; ಪ್ರಾಚೀನಾಗ್ರೇಷು=ಪೂರ...