ಬಾಲಕಾಂಡ - ಸರ್ಗ ೩

ರಾಮಾಯಣದ ಈ ೩ನೇ ಸರ್ಗದಲ್ಲಿ ಮಹಾಕಾವ್ಯದ ರಚನೆಯ ರೂಪುರೇಷೆಗಳನ್ನು ವಿವರಿಸಲಾಗಿದೆ. ಮಹರ್ಷಿ ವಾಲ್ಮೀಕಿ ಈ ಮಹಾಕಾವ್ಯದ ಪ್ರಮುಖ ಘಟ್ಟಗಳ ನಿರೂಪಣೆಯನ್ನು ಹೇಗೆ ಯೋಜಿಸಿದರು ಎಂಬುದನ್ನು ಒಳಗೊಂಡಂತೆ, ಇಡೀ ಕಾವ್ಯದ ಸಾರಾಂಶವನ್ನು ಇದರಲ್ಲಿ ಪ್ರಸ್ತುತಪಡಿಸಲಾಗಿದೆ.
♦
ಶ್ರುತ್ವಾ ವಸ್ತು ಸಮಗ್ರಂ ತದ್ಧರ್ಮಾತ್ಮಾ ಧರ್ಮಸಂಹಿತಮ್|
ವ್ಯಕ್ತಮನ್ವೇಷತೇ ಭೂಯೋ ಯದ್ವೃತ್ತಂ ಧೀಮತಃ ||3.1||
ಇನ್ನಷ್ಟು ಓದಿ......
ಶಬ್ದಾರ್ಥ:ಶ್ರುತ್ವಾ=ಕೇಳಿ; ವಸ್ತು ಸಮಗ್ರಂ=ಸಂಪೂರ್ಣ ವೃತ್ತಾಂತವನ್ನು; ತತ್=ಅದು; ಧರ್ಮಾತ್ಮಾ =ಧರ್ಮಾತ್ಮನು; ಧರ್ಮಸಂಹಿತಮ್=ಧರ್ಮಸಂಹಿತವಾದ; ವ್ಯಕ್ತಮ್=ತಿಳಿದಿದ್ದನ್ನು; ಅನ್ವೇಷತೇ=ಹುಡುಕುತ್ತ; ಭೂಯಃ=ಆದನು; ಯತ್=ಯಾವುದು; ವೃತ್ತಂ=ನಡೆದಿರುವದನ್ನು; ಧೀಮತಃ=ಜ್ಞಾನಿಯು
ಅನುವಾದ:ನಾರದ ಮುನಿಗಳಿಂದ ಸತ್ಯ, ಸಮೃದ್ಧಿ ಮತ್ತು ಶುಭದಾಯಕ ರಾಮಾಯಣದ ಸಾರವನ್ನು ಕೇಳಿದ ಆ ಸದ್ಗುಣಶೀಲ ವಾಲ್ಮೀಕಿ, ಆ ಕುಶಲ ರಾಮನ ಕಥೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಹುಡುಕಲು ಪ್ರಾರಂಭಿಸಿದನು.
♦
ಉಪಸ್ವೃಶ್ಯೋದಕಂ ಸಮ್ಯಙ್ಮುನಿಃ ಸ್ಥಿತ್ವಾ ಕೃತಾಂಜಲಿಃ|
ಪ್ರಾಚೀನಾಗ್ರೇಷು ದರ್ಭೇಷು ಧರ್ಮೇಣಾನ್ವೇಷತೇ ಗತಿಮ್ ||3.2||
ಇನ್ನಷ್ಟು ಓದಿ......
ಶಬ್ದಾರ್ಥ:ಉಪಸ್ಪೃಶ್ಯ=ಮುಟ್ಟಿ, ಆಚಮನ ಮಾಡಿ; ಉದಕಂ=ನೀರನ್ನು; ಸಮ್ಯಕ್=ಚೆನ್ನಾಗಿ; ಮುನಿಃ=ಮುನಿಯು; ಸ್ಥಿತ್ವಾ =ನಿಂತು; ಕೃತಾಂಜಲಿಃ=ಕೈ ಮುಗಿದು; ಪ್ರಾಚೀನಾಗ್ರೇಷು=ಪೂರ್ವಕ್ಕೆ ಮುಖಮಾಡಿ; ದರ್ಭೇಷು=ದರ್ಭೇಯ ಮೇಲೆ, ಹುಲ್ಲಿನ ಆಸನದ ಮೇಲೆ; ಧರ್ಮೇಣ=ಧರ್ಮದಿಂದ; ಅನ್ವೇಷತೇ=ಹುಡುಕುತ್ತ; ಗತಿಮ್=ದಾರಿಯನ್ನು ಅನುವಾದ:ಪೂರ್ವ ದಿಕ್ಕಿಗೆ ಮುಖ ಮಾಡಿ ದರ್ಭೆಯ ಮೇಲೆ ಕುಳಿತು ಆಚಮನ ಮಾಡಿ ವಾಲ್ಮಿಕಿಯು ಕೈ ಜೋಡಿಸಿ ನಿಂತು ಧರ್ಮದಿಂದ ಮುಂದಿನ ಗತಿಯನ್ನು(ರಾಮಾಯಣವನ್ನು ಹೇಗೆ ಬರೆಯಬೇಕೆಂದ) ಅನ್ವೇಷಿಸಿದನು.
♦
ರಾಮಲಕ್ಷ್ಮಣಸೀತಾಭೀ ರಾಜ್ಞಾ ದಶರಥೇನ ಚ|
ಸಭಾರ್ಯೇಣ ಸರಾಷ್ಟ್ರೇಣ ಯತ್ಪ್ರಾಪ್ತಂ ತತ್ರ ತತ್ತ್ವತಃ ||3.3||
ಹಸಿತಂ ಭಾಷಿತಂ ಚೈವ ಗತಿರ್ಯಾ ಯಚ್ಛ ಚೇಷ್ಟಿತಮ್ |
ತತ್ಸರ್ವ ಧರ್ಮವೀರ್ಯೇಣ ಯಥಾವತ್ ಸಂಪ್ರಪಶ್ಯತಿ||3.4||
ಇನ್ನಷ್ಟು ಓದಿ......
ಶಬ್ದಾರ್ಥ: ರಾಮಲಕ್ಷ್ಮಣಸೀತಾಭಿಃ=ರಾಮಲಕ್ಷ್ಮಣ ಹಾಗೂ ಸೀತೆಯರಿಂದ; ರಾಜ್ಞಾ ದಶರಥೇನ=ರಾಜ ದಶರಥನಿಂದ; ಚ=ಹಾಗೂ; ಸಭಾರ್ಯೇಣ=ಭಾರ್ಯೆಯರ ಸಹಿತ, ಹೆಂಡತಿಯರ ಸಹಿತ; ಸರಾಷ್ಟ್ರೇಣ=ರಾಷ್ಟ್ರದಿಂದ; ಯತ್ಪ್ರಾಪ್ತಂ=ಯಾವುದು ಪ್ರಾಪ್ತವೋ; ತತ್ರ=ಅಲ್ಲಿ; ತತ್ತ್ವತಃ=ತತ್ವಶಃ, ಇದ್ದ ಹಾಗೆ; ಹಸಿತಂ=ನಗುವನ್ನು; ಭಾಷಿತಮ್=ಮಾತನ್ನು; ಚ ಏವ=ಸಹ, ಕೂಡ; ಗತಿಃ=ಗತಿ, ಘಟನೆಗಳ ಸಾಲು; ಯಾ=ಯಾವುದು; ಯತ್=ಯಾವುದು; ಚ=ಹಾಗೂ; ಚೇಷ್ಟಿತಮ್=ನಡೆದಿದ್ದು; ತತ್ ಸರ್ವ=ಅದೆಲ್ಲ; ಧರ್ಮವೀರ್ಯೇಣ=ಧರ್ಮದ ಬಲದಿಂದ; ಯಥಾವತ್=ಹೇಗಿದೆಯೋ ಹಾಗೆ; ಸಂಪ್ರಪಶ್ಯತಿ=ನೋಡುತ್ತಾನೆ
ಅನುವಾದ: ತನ್ನ ತಪಸ್ಸಿನ ಶಕ್ತಿಯಿಂದ, ಆ ಮಹಾ ಋಷಿಯು ರಾಮ, ಲಕ್ಷ್ಮಣ ಮತ್ತು ಸೀತೆ, ರಾಜ ದಶರಥ, ಅವನ ಪತ್ನಿಯರು, ಅವನ ರಾಜ್ಯಅವರೆಲ್ಲ ಗಮನಿಸಿದ, ಅನುಭವಿಸಿದ, ಪ್ರಯತ್ನಿಸಿದ ಎಲ್ಲವನ್ನೂ ಸ್ಪಷ್ಟವಾಗಿ ಕಲ್ಪಿಸಿಕೊಂಡನು. ಅವರ ನಗು ಮತ್ತು ಸಂಭಾಷಣೆಯನ್ನು ನೈಜ ಘಟನೆಯಂತೆಯೇ ಸ್ಪಷ್ಟವಾಗಿ ಊಹಿಸಿಕೊಂಡನು.
♦
ಸ್ತ್ರೀತೃತೀಯೇನ ಚ ಯತ್ಪ್ರಾಪ್ತಂ ಚರತಾ ವನೇ|
ಸತ್ಯಸಂಧೇನ ರಾಮೇಣ ತತ್ಸರ್ವಂ ಚಾನ್ವವೇಕ್ಷಿತಮ್||3.5||
ಇನ್ನಷ್ಟು ಓದಿ......
ಶಬ್ದಾರ್ಥ: ಸ್ತ್ರೀತೃತೀಯೇನ=ಮೂರನೆಯವಳಾಗಿ ಪತ್ನಿಯಿಂದ; ಚ=ಹಾಗೂ; ಯತ್ ಪ್ರಾಪ್ತಂ=ಯಾವುದೆಲ್ಲ ಬಂದವೋ, ಲಭಿಸಿದವೋ; ಚರತಾ=ನಡೆಯುತ್ತ; ವನೇ=ಕಾಡಲ್ಲಿ; ಸತ್ಯಸಂಧೇನ=ಸತ್ಯಸಂಧನಾದ; ರಾಮೇಣ=ರಾಮನ; ತತ್ ಸರ್ವಂ=ಅದೆಲ್ಲವೂ; ಚ=ಹಾಗೂ; ಅನ್ವವೇಕ್ಷಿತಮ್=ನೋಡಿದನು, ಊಹಿಸಿದನು; ಅನುವಾದ: ಆ ಸಮಯದಲ್ಲಿ ರಾಮನು ತನ್ನ ಹೆಂಡತಿಯನ್ನು ಮೂರನೇ ಸಂಗಾತಿಯಾಗಿಟ್ಟುಕೊಂಡು(ರಾಮ, ಲಕ್ಷ್ಮಣ ಹಾಗೂ ಸೀತೆಯರು) ಕಾಡಿನಲ್ಲಿ ಸಂಚರಿಸುವಾಗ ಎದುರಿಸಿದ ಎಲ್ಲವನ್ನೂ ವಾಲ್ಮೀಕಿಯು ನೋಡಿದನು (ತನ್ನ ಮನದ ಕಣ್ಣುಗಳಿಂದ ನೋಡಿದನು).
♦
ತತಃ ಪಶ್ಯತಿ ಧರ್ಮಾತ್ಮಾ ತತ್ಸರ್ವಂ ಯೋಗಮಾಸ್ಥಿತಃ|
ಪುರಾ ಯತ್ತತ್ರ ನಿರ್ವೃತ್ತಂ ಪಾಣಾವಾಮಲಕಂ ಯಥಾ||3.6||
ಇನ್ನಷ್ಟು ಓದಿ......
ಶಬ್ದಾರ್ಥ:ತತಃ=ಆಮೇಲೆ; ಪಶ್ಯತಿ=ನೋಡುತ್ತಾನೆ; ಧರ್ಮಾತ್ಮಾ=ಧರ್ಮಾತ್ಮನು (ವಾಲ್ಮೀಕಿ); ತತ್=ಅದು; ಸರ್ವಂ=ಎಲ್ಲವೂ; ಯೋಗಮಾಸ್ಥಿತಃ=ಯೋಗಸ್ಥನಾದ; ಪುರಾ=ಪೂರ್ವ ಕಾಲದಲ್ಲಿ; ಯತ್=ಯಾವದು; ತತ್ರ=ಅಲ್ಲಿ; ನಿರ್ವೃತ್ತಂ=ನಡೆದಿತ್ತೋ; ಪಾಣೌ=ಅಂಗೈನಲ್ಲಿ; ಆಮಲಕಂ=ನೆಲ್ಲಿಕಾಯಿ; ಯಥಾ=ಹೇಗೆ; ಅನುವಾದ:ಯೋಗಬಲದಿಂದ, ಧರ್ಮನಿಷ್ಠನಾದ ವಾಲ್ಮೀಕಿಯು ರಾಮನಿಗೆ ಸಂಬಂಧಿಸಿದಂತೆ ಹಿಂದೆ ನಡೆದ ಘಟನೆಗಳ ಸಂಪೂರ್ಣ ಹಾದಿಯನ್ನು ಅಂಗೈಯಲ್ಲಿ ನೆಲ್ಲಿಕಾಯಿಯಂತೆ ಸ್ಪಷ್ಟವಾಗಿ ನೋಡಿದನು.
♦
ತತ್ಸರ್ವಂ ತತ್ತ್ವತೋ ದೃಷ್ಟ್ವಾ ಧರ್ಮೇಣ ಸ ಮಹಾದ್ಯುತಿಃ|
ಅಭಿರಾಮಸ್ಯ ರಾಮಸ್ಯ ಚರಿತಂ ಕರ್ತುಮುದ್ಯತಃ ||3.7||
ಇನ್ನಷ್ಟು ಓದಿ......
ಶಬ್ದಾರ್ಥ:ತತ್=ಅದು; ಸರ್ವಂ=ಎಲ್ಲವನ್ನೂ; ತತ್ವತಃ=ವಾಸ್ತವವಾಗಿ, ಮೂಲಭೂತವಾಗಿ; ದೃಷ್ಟ್ವಾ=ನೋಡಿ; ಧರ್ಮೇಣ=ಧರ್ಮದಿಂದ; ಸಃ=ಅವನು; ಮಹಾದ್ಯುತಿಃ=ಮಹಾಪ್ರಕಾಶವಾನನು; ಅಭಿರಾಮಸ್ಯ=ಮನಮೋಹಕನ; ರಾಮಸ್ಯ=ರಾಮನ; ಚರಿತಂ=ಚರಿತ್ರೆಯನ್ನು; ಕರ್ತುಂ=ಮಾಡಲು, ಬರೆಯಲು; ಉದ್ಯತಃ=ಸಿದ್ಧನಾದನು ಅನುವಾದ:ಅದೆಲ್ಲವನ್ನೂ ಧರ್ಮದ, ತನ್ನ ತಪೋಶಕ್ತಿಯ ಸಹಾಯದಿಂದ ನೋಡಿದ ವಾಲ್ಮೀಕಿಯು ಮನಮೋಹಕನಾದ ರಾಮನ ಚರಿತೆಯನ್ನು ಬರೆಯಲು ಸಿದ್ಧನಾದನು.
♦
ಕಾಮಾರ್ಥಗುಣಸಂಯುಕ್ತಂ ಧರ್ಮಾರ್ಥಗುಣವಿಸ್ತರಮ್|
ಸಮುದ್ರಮಿವ ರತ್ನಾಢ್ಯಂ ಸರ್ವಶ್ರುತಿಮನೋಹರಮ್||3.8||
ಸ ಯಥಾ ಕಥಿತಂ ಪೂರ್ವಂ ನಾರದೇನ ಮಹರ್ಷಿಣಾ|
ರಘುವಂಶಸ್ಯ ಚರಿತಂ ಚಕಾರ ಭಗವಾನೃಷಿಃ||3.9||
ಇನ್ನಷ್ಟು ಓದಿ......
ಶಬ್ದಾರ್ಥ:ಕಾಮಾರ್ಥಗುಣಸಂಯುಕ್ತಂ=ಕಾಮ, ಅರ್ಥ ಇತ್ಯಾದಿ ಗುಣಗಳನ್ನು ಒಳಗೊಂಡ; ಧರ್ಮಾರ್ಥಗುಣವಿಸ್ತರಮ್=ಧರ್ಮ, ಅರ್ಥ ಈ ಮೊದಲಾದ ಗುಣಗಳನ್ನು ವಿಸ್ತ್ರತವಾಗಿ ಹೊಂದಿದ; ಸಮುದ್ರಂ ಇವ=ಸಮುದ್ರದಂತೆ; ರತ್ನಾಢ್ಯಂ=ರತ್ನಗಳಿಂದ ತುಂಬಿದ; ಸರ್ವಶ್ರುತಿಮನೋಹರಮ್=ಕೇಳಲು ಮನೋಹರವಾದ; ಸಃ=ಅವನು; ಯಥಾ=ಹೇಗೆ; ಕಥಿತಂ=ಹೇಳಲ್ಪಟ್ಟಿದ್ದು; ಪೂರ್ವಂ=ಪೂರ್ವದಲ್ಲಿ, ಮೊದಲು; ನಾರದೇನ=ನಾರದನಿಂದ; ಮಹರ್ಷಿಣಾ=ಮಹರ್ಷಿಯಿಂದ; ರಘುವಂಶಸ್ಯ=ರಘುವಂಶದವನ; ಚರಿತಂ=ಚರಿತ್ರೆಯನ್ನು, ಕತೆಯನ್ನು; ಚಕಾರ=ರಚಿಸಿದನು
ಅನುವಾದ:ಧರ್ಮ, ಅರ್ಥ, ಕಾಮಗುಣ ಸಂಯುಕ್ತನಾದ, ಸಮುದ್ರದಂತೆ ರತ್ನಾಢ್ಯನಾದ ಕೇಳಲು ಮನೋಹರವಾದ, ಮೊದಲು ನಾರದನು ಹೇಳಿದಂತೆ ರಘುವಂಶಜನಾದ ರಾಮನ ಚರಿತೆಯನ್ನು ಭಗವಾನ್ ವಾಲ್ಮೀಕಿ ಋಷಿಯು ರಚಿಸಿದನು.
♦
ಜನ್ಮ ರಾಮಸ್ಯ ಸುಮಹದ್ವೀರ್ಯಂ ಸರ್ವಾನುಕೂಲತಾಮ್|
ಲೋಕಸ್ಯ ಪ್ರಿಯತಾಂ ಕ್ಷಾಂತಿಂ ಸೌಮ್ಯತಾಂ ಸತ್ಯಶೀಲತಾಮ್ ||3.10||
ಇನ್ನಷ್ಟು ಓದಿ......
ಶಬ್ದಾರ್ಥ:ಜನ್ಮ=ಜನ್ಮ; ರಾಮಸ್ಯ=ರಾಮನ; ಸುಮಹತ್ ವೀರ್ಯಮ್=ಮಹತ್ತಾದ ಶಕ್ತಿ; ಸರ್ವಾನುಕೂಲತಾಮ್=ಎಲ್ಲರಿಗೆ ಅನುಕೂಲ ಮಾಡುವ ಸ್ವಭಾವ; ಲೋಕಸ್ಯ=ಲೋಕದ; ಪ್ರಿಯತಾಮ್ =ಪ್ರೀತಿ; ಕ್ಷಾಂತಿಂ=ತಾಳ್ಮೆ; ಸೌಮ್ಯತಾಂ=ಸೌಮ್ಯತೆಯನ್ನು; ಸತ್ಯಶೀಲತಾಂ=ಸತ್ಯಶೀಲತೆಯನ್ನು;
ಅನುವಾದ: ರಾಮನ ಜನ್ಮ, ಅವನ ಮಹತ್ ಶಕ್ತಿ, ಅವನ ಸಹಾಯ ಮಾಡುವ ಸ್ವಭಾವ, ಎಲ್ಲರಲ್ಲಿ ಪ್ರೀತಿ, ತಾಳ್ಮೆ, ಸೌಮ್ಯತೆ, ಸತ್ಯಶೀಲತೆ (ಇವೆಲ್ಲವನ್ನು ವಾಲ್ಮೀಕಿ ಬರೆದನು).
♦
ನಾನಾಚಿತ್ರಕಥಾಶ್ಚಾನ್ಯಾ ವಿಶ್ವಾಮಿತ್ರಸಮಾಗಮೇ|
ಜಾನಕ್ಯಾಶ್ಚ ವಿವಾಹಂ ಚ ಧನುಷಶ್ಚ ವಿಭೇದನಮ್||3.11||
ಇನ್ನಷ್ಟು ಓದಿ......
ಶಬ್ದಾರ್ಥ:ನಾನಾಚಿತ್ರಕಥಾಃ=ವಿಧವಿಧ ರೂಪದ ಕತೆಗಳು; ಚ=ಹಾಗೂ; ಅನ್ಯಾಃ=ಬೇರೆಯವು; ವಿಶ್ವಾಮಿತ್ರಸಮಾಗಮೇ=ವಿಶ್ವಾಮಿತ್ರನ ಜೊತೆ ಸೇರಿದಾಗ; ಜಾನಕ್ಯಾಃ=ಜಾನಕಿಯ, ಸೀತೆಯ; ಚ=ಹಾಗೂ; ವಿವಾಹಂ=ವಿವಾಹ; ಚ = ಹಾಗೂ; ಧನುಷಃ ಚ=ಹಾಗೂ ಬಿಲ್ಲಿನ; ವಿಭೇದನಮ್=ಮುರಿಯುವದು;
ಅನುವಾದ: ವಿಶ್ವಾಮಿತ್ರರೊಡನೆ ರಾಮನ ಒಡನಾಟ, ಹಲವಾರು ಅದ್ಭುತ ಕಥೆಗಳು, ಮಹಾಧನುಸ್ಸಿನ ಭಂಗ ಮತ್ತು ಜಾನಕಿಯೊಂದಿಗೆ ರಾಮನ ವಿವಾಹ.
♦
ರಾಮರಾಮವಿವಾದಂ ಚ ಗುಣಾನ್ದಾಶರಥೇಸ್ತಥಾ|
ತಥಾ ರಾಮಾಭಿಷೇಕಂ ಚ ಕೈಕಯ್ಯಾ ದುಷ್ಟಭಾವತಾಮ್ ||3.12||
ಇನ್ನಷ್ಟು ಓದಿ......
ಶಬ್ದಾರ್ಥ:ರಾಮರಾಮವಿವಾದಂ=ರಾಮ ಹಾಗೂ ಪರಶುರಾಮರ ವಿವಾದ; ಚ=ಹಾಗೂ; ಗುಣಾನ್=ಸದ್ಗುಣಗಳನ್ನು; ದಾಶರಥೇ=ದಶರಥ ಪುತ್ರನ, ರಾಮನ; ತಥಾ=ಹಾಗೆ; ತಥಾ=ಹಾಗೆಯೇ; ರಾಮಾಭಿಷೇಕಂ=ರಾಮನ ಪಟ್ಟಾಭಿಷೇಕ; ಚ=ಹಾಗೂ; ಕೈಕಯ್ಯಾ=ಕೈಕೇಯಿಯ; ದುಷ್ಟಭಾವತಾಮ್=ದುರ್ಬುದ್ಧಿಯನ್ನು
ಅನುವಾದ:ರಾಮ ಹಾಗೂ ಪರಶುರಾಮರ ವಿವಾದ, ದಶರಥ ಪುತ್ರನಾದ ರಾಮನ ಸದ್ಗುಣಗಳು, ಹಾಗೆಯೇ ರಾಮನ ಪಟ್ಟಾಭಿಷೇಕ ಹಾಗೂ ಕೈಕೇಯಿಯ ದುಷ್ಟಸ್ವಭಾವ….
♦
ವಿಘಾತಂ ಚಾಭಿಷೇಕಸ್ಯ ರಾಮಸ್ಯ ಚ ವಿವಾಸನಮ್|
ರಾಜ್ಞಃ ಶೋಕವಿಲಾಪಂ ಚ ಪರಲೋಕಸ್ಯ ಚಾಶ್ರಯಮ್||3.13||
ಇನ್ನಷ್ಟು ಓದಿ......
ಶಬ್ದಾರ್ಥ: ವಿಘಾತಂ=ಆಘಾತ, ನಾಶ; ಚ=ಹಾಗೂ; ಅಭಿಷೇಕಸ್ಯ=ಅಭಿಷೇಕದ; ರಾಮಸ್ಯ=ರಾಮನ; ಚ=ಹಾಗೂ; ವಿವಾಸನಮ್=ಉಚ್ಛಾಟನೆ; ರಾಜ್ಞಃ=ರಾಜನ(ದಶರಥನ); ಶೋಕವಿಲಾಪಂ=ಶೋಕವಿಲಾಪ; ಚ=ಹಾಗೂ; ಪರಲೋಕಸ್ಯ=ಪರಲೋಕದ; ಚ=ಹಾಗೂ; ಆಶ್ರಯಮ್=ಆಶ್ರಯ
ಅನುವಾದ:ರಾಘವನ ರಾಜ್ಯಾಭಿಷೇಕಕ್ಕೆ ಉಂಟಾದ ಅಡಚಣೆ; ಅವನ ವನವಾಸ; ರಾಜ ದಶರಥನ ದುಃಖ ಹಾಗೂ ಆಕ್ರಂದನ, ಮತ್ತು ಆ ಮೂಲಕ ಅವನ ಪರಲೋಕ ಪ್ರಾಪ್ತಿ...
 
 
♦
ಪ್ರಕೃತೀನಾಂ ವಿಷಾದಂ ಚ ಪ್ರಕೃತೀನಾಂ ವಿಸರ್ಜನಮ್ |
ನಿಷಾದಾಧಿಪಸಂವಾದಂ ಸೂತೋಪಾವರ್ತನಂ ತಥಾ ||3.14||
ಇನ್ನಷ್ಟು ಓದಿ......
ಶಬ್ದಾರ್ಥ: ಪ್ರಕೃತೀನಾಂ=ಪ್ರಜೆಗಳ; ವಿಷಾದಂ=ದುಃಖ,ವಿಷಾದ; ಚ=ಹಾಗೂ; ಪ್ರಕೃತೀನಾಂ=ಪ್ರಜೆಗಳ; ವಿಸರ್ಜನಂ=ಹಿಂದಿರುಗುವದು; ನಿಷಾದಾಧಿಪ=ನಿಷಾದರ ರಾಜ,ಗುಹ; ಸಂವಾದಂ=ಸಂವಾದ,ಮಾತುಕತೆ; ಸೂತ ಉಪವರ್ತನಂ=ಸೂತನ ಹಿಂದಿರುಗುವದು; ತಥಾ=ಹಾಗೆ;
ಅನುವಾದ:ಪ್ರಜೆಗಳ ದುಃಖ, ರಾಮನು ಅವರನ್ನು ಬಿಟ್ಟು ಮುಂದೆ ಸಾಗುವುದು, ನಿಷಾದರ ರಾಜ ಗುಹನೊಂದಿಗೆ ರಾಮನ ಸಂಭಾಷಣೆ, ಸಾರಥಿ ಸುಮಂತ್ರನನ್ನು ಅರಣ್ಯದಿಂದ ರಾಜ್ಯಕ್ಕೆ ಹಿಂದಕ್ಕೆ ಕಳುಹಿಸುವುದು ಹಾಗೂ ಗಂಗಾನದಿಯ ದಡದಲ್ಲಿ ಆ ಮೂವರನ್ನು (ರಾಮ, ಲಕ್ಷ್ಮಣ ಮತ್ತು ಸೀತೆ) ಬಿಟ್ಟು ಬರುವುದು
♦
ಗಂಗಾಯಾಶ್ಚಾಪಿ ಸಂತಾರಂ ಭರದ್ವಾಜಸ್ಯ ದರ್ಶನಮ್
ಭರದ್ವಾಜಾಭ್ಯನುಜ್ಞಾನಾಚ್ಚಿತ್ರಕೂಟಸ್ಯ ದರ್ಶನಮ್ ||3.15||
ಇನ್ನಷ್ಟು ಓದಿ......
ಶಬ್ದಾರ್ಥ:ಗಂಗಾಯಾಃ=ಗಂಗಾ ನದಿಯ; ಚ ಅಪಿ=ಹಾಗೂ; ಸಂತಾರಂ=ದಾಟುವಿಕೆ; ಭರದ್ವಾಜಸ್ಯ=ಭರದ್ವಾಜನ; ದರ್ಶನಂ=ದರ್ಶನ; ಭರದ್ವಾಜಾಭ್ಯನುಜ್ಞಾನಾತ್=ಭರದ್ವಾಜರ ಅನುಮತಿಯಿಂದ; ಚಿತ್ರಕೂಟಸ್ಯ=ಚಿತ್ರಕೂಟದ; ದರ್ಶನಮ್=ದರ್ಶನ;
ಅನುವಾದ:ಗಂಗಾ ನದಿಯನ್ನು ದಾಟುವುದು, ಋಷಿ ಭಾರದ್ವಾಜರನ್ನು ಭೇಟಿಯಾಗುವದು, ಋಷಿ ಭಾರದ್ವಾಜರ ಸಲಹೆಯ ಮೇರೆಗೆ ಚಿತ್ರಕೂಟದ ಕಡೆಗೆ ಹೊರಡುವದು
♦
ವಾಸ್ತುಕರ್ಮ ನಿವೇಶಂ ಚ ಭರತಾಗಮನಂ ತಥಾ
ಪ್ರಸಾದನಂ ಚ ರಾಮಸ್ಯ ಪಿತುಶ್ಚ ಸಲಿಲಕ್ರಿಯಾಮ್ ||3.16||
ಇನ್ನಷ್ಟು ಓದಿ......
ಶಬ್ದಾರ್ಥ:ವಾಸ್ತುಕರ್ಮ=ಮನೆ ಕಟ್ಟಿಸುವಿಕೆ; ನಿವೇಶಂ=ವಸತಿ,ಆಶ್ರಮ,ಕುಟೀರವನ್ನು; ಚ=ಹಾಗೂ; ಭರತಾಗಮನಂ=ಭರತನ ಆಗಮನ; ತಥಾ=ಹಾಗೆಯೇ; ಪ್ರಸಾದನಂ=ಸಮಾಧಾನ ಪಡಿಸುವದು; ಚ=ಹಾಗೂ; ರಾಮಸ್ಯ=ರಾಮನ; ಪಿತುಃ=ತಂದೆಯ; ಚ=ಹಾಗೂ; ಸಲಿಲಕ್ರಿಯಾಮ್ = ತರ್ಪಣ ಬಿಡುವದು;
ಅನುವಾದ:ಆಶ್ರಮದ ನಿರ್ಮಾಣ ಮತ್ತು ಅದರಲ್ಲಿ ವಾಸಿಸುವುದು; ರಾಜ್ಯವನ್ನು ಮರಳಿ ಪಡೆಯೆಂದು ರಾಮನನ್ನು ಬೇಡಲು ಆ ಸ್ಥಳಕ್ಕೆ ಭರತನ ಆಗಮನ; ತಂದೆಯ ನಿಧನವನ್ನು ಕೇಳಿದ ರಾಮನು ತನ್ನ ತಂದೆಗೆ ತರ್ಪಣವನ್ನು ಕೊಡುವದು.
♦
ಪಾದುಕಾಗ್ರ್ಯಾಭಿಷೇಕಂ ಚ ನಂದಿಗ್ರಾಮನಿವಾಸನಮ್
ದಂಡಕಾರಣ್ಯಗಮನಂ ವಿರಾಧಸ್ಯ ವಧಂ ತಥಾ ||3.17||
ಇನ್ನಷ್ಟು ಓದಿ......
ಶಬ್ದಾರ್ಥ:ಪಾದುಕಾ=ಚಪ್ಪಲಿಗಳು; ಅಗ್ರ್ಯ=ಶ್ರೇಷ್ಠ; ಅಭಿಷೇಕಂ=ಅಭಿಷೇಕ; ಚ=ಹಾಗೂ; ನಂದಿಗ್ರಾಮನಿವಾಸನಮ್=ನಂದಿಗ್ರಾಮದಲ್ಲಿ ನಿವಾಸ; ದಂಡಕಾರಣ್ಯಗಮನಂ=ದಂಡಕಾರಣ್ಯಕ್ಕೆ ಹೋಗುವದು; ವಿರಾಧಸ್ಯ=ವಿರಾಧನ; ವಧಂ=ವಧೆ, ಕೊಲ್ಲುವದು; ತಥಾ=ಹಾಗೆಯೇ
ಅನುವಾದ:(ವಾಲ್ಮೀಕಿ ವಿವರಿಸಿದ್ದು:) ಅಧಿಕಾರದ ಸಂಕೇತವಾಗಿ ರಾಮನ ಪಾದುಕೆಗಳನ್ನು ಪ್ರತಿಷ್ಠಾಪಿಸಿದ್ದು, ಭರತನು ನಂದಿಗ್ರಾಮದಲ್ಲಿ ನೆಲೆಸಿ ಅಲ್ಲಿಂದ ರಾಜ್ಯಭಾರ ನಡೆಸುತ್ತಿರುವುದು, ರಾಮನು ದಂಡಕಾರಣ್ಯಕ್ಕೆ ತೆರಳಿದ್ದು ಮತ್ತು ವಿರಾಧನನ್ನು ಸಂಹರಿಸಿದ್ದು.
♦
ದರ್ಶನಂ ಶರಭಂಗಸ್ಯ ಸುತೀಕ್ಷ್ಣೇನಾಪಿ ಸಮಾಗಮಮ್
ಅನಸೂಯಾಸಮಾಖ್ಯಾಂ ಚ ಅಂಗರಾಗಸ್ಯ ಚಾರ್ಪಣಮ್ ||3.18||
ಇನ್ನಷ್ಟು ಓದಿ......
ಶಬ್ದಾರ್ಥ: ದರ್ಶನಂ=ದರ್ಶನ, ಭೆಟ್ಟಿ; ಶರಭಂಗಸ್ಯ=ಶರಭಂಗನ; ಸುತೀಕ್ಷ್ಣೇನ=ಸುತೀಕ್ಷ್ಣನ; ಅಪಿ=ಕೂಡ; ಸಮಾಗಮಮ್ =ಭೆಟ್ಟಿ; ಅನುಸೂಯಾ ಸಮಾಖ್ಯಾಂ=ಅನುಸೂಯೆಯ ವಿವರಣೆ; ಚ=ಹಾಗೂ; ಅಂಗರಾಗಸ್ಯ=ಅತ್ತರಿನ, ಸುಗಂಧದ್ರವ್ಯದ; ಚ=ಹಾಗೂ; ಅರ್ಪಣಮ್=ಅರ್ಪಣೆ
ಅನುವಾದ:ಶರಭಂಗನೊಂದಿಗಿನ ಭೇಟಿ, ಸುತೀಕ್ಷ್ಣನೊಂದಿಗಿನ ಮುಖಾಮುಖಿ, ಹಾಗೂ ಸೀತೆಯು ಅನಸೂಯೆಯೊಂದಿಗೆ ಮಾತುಕತೆ ಮತ್ತು ಅನಸೂಯೆ ಅವಳಿಗೆ ಸುಗಂಧ ದ್ರವ್ಯವನ್ನು ಉಡುಗೊರೆಯಾಗಿ ನೀಡಿದ ಘಟನೆಗಳನ್ನು (ಅವರು ವಿವರಿಸಿದರು).
♦
ಅಗಸ್ತ್ಯದರ್ಶನಂ ಚೈವ ಜಟಾಯೋರಭಿಸಂಗಮಮ್
ಪಂಚವಟ್ಯಾಶ್ಚ ಗಮನಂ ಶೂರ್ಪಣಖ್ಯಾಶ್ಚ ದರ್ಶನಮ್ ||3.19||
ಇನ್ನಷ್ಟು ಓದಿ......
ಶಬ್ದಾರ್ಥ: ಅಗಸ್ತ್ಯದರ್ಶನಂ=ಅಗಸ್ತ್ಯ ಋಷಿಗಳ ದರ್ಶನ; ಚ ಏವ=ಕೂಡ; ಜಟಾಯೋಃ=ಜಟಾಯುವಿನ; ಅಭಿಸಂಗಮಮ್=ಭೆಟ್ಟಿ; ಪಂಚವಟ್ಯಾಃ=ಪಂಚವಟಿಯ; ಚ=ಹಾಗೂ; ಗಮನಂ=ಹೋಗುವದು; ಶೂರ್ಪಣಖ್ಯಾಃ=ಶೂರ್ಪಣಖಿಯ; ಚ=ಹಾಗೂ; ದರ್ಶನಮ್=ಭೇಟಿ;
ಅನುವಾದ:ಅಗಸ್ತ್ಯನೊಂದಿಗೆ ಭೇಟಿ, ಜಟಾಯುವಿನೊಂದಿಗಿನ ಅವರ ಭೇಟಿ, ಪಂಚವಟಿಗೆ ಅವರ ಪ್ರಯಾಣ, ಮತ್ತು ಶೂರ್ಪಣಖಿಯ ಆಗಮನ.
♦
ಶೂರ್ಪಣಖ್ಯಾಶ್ಚ ಸಂವಾದಂ ವಿರೂಪಕರಣಂ ತಥಾ
ವಧಂ ಖರತ್ರಿಶರಸೋರುತ್ಥಾನಂ ರಾವಣಸ್ಯ ಚ ||3.20||
ಇನ್ನಷ್ಟು ಓದಿ......
ಶಬ್ದಾರ್ಥ: ಶೂರ್ಪಣಖ್ಯಾಃ=ಶೂರ್ಪಣಖಿಯ; ಸಂವಾದಂ=ಸಂವಾದ,ಮಾತುಕತೆ; ವಿರೂಪಕರಣಂ=ವಿರೂಪಗೊಳಿಸುವದು; ವಧಂ=ವಧೆ; ಖರತ್ರಿಶಿರಸೋಃ=ಖರತ್ರಿಶಿರರ; ಉತ್ಥಾನಂ=ಅಭಿವೃದ್ಧಿ, ಆರಂಭ; ರಾವಣಸ್ಯ=ರಾವಣನ; ಚ=ಹಾಗೂ;
ಅನುವಾದ:(ಅವನು ವಿವರಿಸಿದನು) ರಾಮನ ಶೂರ್ಪಣಖೆಯೊಂದಿಗಿನ ಸಂಭಾಷಣೆ, ಅವಳನ್ನು ವಿರೂಪಗೊಳಿಸುವದು, ಖರ ಮತ್ತು ತ್ರಿಶಿರರ ವಧೆ ಮತ್ತು ರಾವಣನ ಪ್ರಯತ್ನಗಳ ಪ್ರಾರಂಭ (ರಾಮನಿಗೆ ಹಾನಿ ಮಾಡಲು).
♦
ಮಾರೀಚಸ್ಯ ವಧಂ ಚೈವ ವೈದೇಹ್ಯಾ ಹರಣಂ ತಥಾ
ರಾಘವಸ್ಯ ವಿಲಾಪಂ ಚ ಗೃಧ್ರರಾಜನಿಬರ್ಹಣಮ್ ||3.21||
ಇನ್ನಷ್ಟು ಓದಿ......
ಶಬ್ದಾರ್ಥ: ಮಾರೀಚಸ್ಯ=ಮಾರೀಚನ; ವಧಂ=ವಧೆ; ಚ ಏವ=ಕೂಡ; ವೈದೇಹ್ಯಾಃ=ವೈದೇಹಿಯ, ಸೀತೆಯ; ಹರಣಂ=ಅಪಹರಣ; ತಥಾ=ಹಾಗೆಯೇ; ರಾಘವಸ್ಯ=ರಾಘವನ, ರಾಮನ; ವಿಲಾಪಂ=ವಿಲಾಪ,ಶೋಕ; ಚ=ಹಾಗೂ; ಗೃಧ್ರರಾಜ=ಹದ್ದುಗಳ ರಾಜ, ಜಟಾಯು;ನಿಬರ್ಹಣಮ್=ಹತ್ಯೆ
ಅನುವಾದ: ಮಾರೀಚನ ವಧೆ, ಸೀತೆಯ ಅಪಹರಣ, ಸೀತೆಯ ಅಗಲಿಕೆಯಿಂದ ರಾಮನು ಪಟ್ಟ ದುಃಖ ಮತ್ತು ಜಟಾಯುವಿನ ಮರಣ (ಬಗ್ಗೆ ವಾಲ್ಮೀಕಿ ವಿವರಿಸಿದನು.)
♦
ಕಬಂಧದರ್ಶನಂ ಚೈವ ಪಂಪಾಯಾಶ್ಚಾಪಿ ದರ್ಶನಮ್
ಶಬರೀ ದರ್ಶನಂ ಚೈವ ಹನೂಮದ್ದರ್ಶನಂ ತಥಾ||3.22||
ಇನ್ನಷ್ಟು ಓದಿ......
ಶಬ್ದಾರ್ಥ: ಕಬಂಧದರ್ಶನಂ=ಕಬಂಧನ ದರ್ಶನ; ಚ ಏವ=ಕೂಡ; ಪಂಪಾಯಾಃ=ಪಂಪಾ ನದಿಯ; ಚ ಅಪಿ=ಕೂಡ; ದರ್ಶನಮ್=ದರ್ಶನ; ಶಬರೀ ದರ್ಶನಂ=ಶಬರಿಯ ದರ್ಶನ; ಚ ಏವ=ಕೂಡ; ಹನೂಮತ್ ದರ್ಶನಂ=ಹನುಮಂತನ ದರ್ಶನ; ತಥಾ=ಹಾಗೆಯೇ;
ಅನುವಾದ:ಕಬಂಧನೊಂದಿಗಿನ ರಾಮನ ಮುಖಾಮುಖಿ, ಪಂಪಾ ನದಿಯ ವೀಕ್ಷಣೆ, ಶಬರಿ ಮತ್ತು ಹನುಮಂತನ ಭೇಟಿ.
♦
ಋಶ್ಯಮೂಕಸ್ಯ ಗಮನಂ ಸುಗ್ರೀವೇಣ ಸಮಾಗಮಮ್
ಪ್ರತ್ಯಯೋತ್ಪಾದನಂ ಸಖ್ಯಂ ವಾಲಿಸುಗ್ರೀವವಿಗ್ರಹಮ್ ||3.23||
ಇನ್ನಷ್ಟು ಓದಿ......
ಶಬ್ದಾರ್ಥ: ಋಶ್ಯಮೂಕಸ್ಯ=ಋಷ್ಯಮುಕಕ್ಕೆ; ಗಮನಂ=ಹೋಗುವದು; ಸುಗ್ರೀವೇಣ ಸಮಾಗಮಮ್=ಸುಗ್ರೀವನ ಜೊತೆ ಭೇಟಿ; ಪ್ರತ್ಯಯ ಉತ್ಪಾದನಂ=ನಂಬಿಕೆ ಬೆಳೆಸುವದು; ಸಖ್ಯಂ=ಗೆಳೆತನವನ್ನು; ವಾಲಿಸುಗ್ರೀವ ವಿಗ್ರಹಮ್=ವಾಲಿ ಹಾಗೂ ಸುಗ್ರೀವರ ಯುದ್ಧ
ಅನುವಾದ:ಋಷ್ಯಮುಕ ಪರ್ವತಕ್ಕೆ ರಾಮನ ನಿರ್ಗಮನ, ಸುಗ್ರೀವನೊಂದಿಗಿನ ಅವನ ಭೇಟಿ ಮತ್ತು ಅವನೊಂದಿಗಿನ ಸ್ನೇಹದ ಒಪ್ಪಂದ, ಅವನಲ್ಲಿ ವಿಶ್ವಾಸವನ್ನು ಬೆಳೆಸಿಕೊಳ್ಳುವಿಕೆ ಮತ್ತು ಸುಗ್ರೀವ ಮತ್ತು ವಾಲಿಯ ನಡುವಿನ ಯುದ್ಧ
♦
ವಾಲಿಪ್ರಮಥನಂ ಚೈವ ಸುಗ್ರೀವಪ್ರತಿಪಾದನಮ್
ತಾರಾವಿಲಾಪಂ ಸಮಯಂ ವರ್ಷರಾತ್ರನಿವಾಸನಮ್||3.24||
ಇನ್ನಷ್ಟು ಓದಿ......
ಶಬ್ದಾರ್ಥ:ವಾಲಿಪ್ರಮಥನಂ=ವಾಲಿಯ ವಧೆ; ಚ ಏವ=ಹಾಗೂ; ಸುಗ್ರೀವಪ್ರತಿಪಾದನಮ್=ಸುಗ್ರೀವನ ರಾಜ್ಯಾಭಿಷೇಕ; ತಾರಾ ವಿಲಾಪಂ=ತಾರೆಯ ಶೋಕ; ಸಮಯಂ=ಸಮಯ; ವರ್ಷರಾತ್ರನಿವಾಸನಂ=ಮಳೆಯ ದಿನ-ರಾತ್ರಿಗಳಲ್ಲಿ ಅಲ್ಲೆ ನಿವಾಸ
ಅನುವಾದ:ವಾಲಿಯ ವಧೆ, ಸುಗ್ರೀವನ ಪ್ರತಿಷ್ಠಾಪನೆ, ತಾರೆಯ ಶೋಕ, ರಾಮ-ಲಕ್ಷ್ಮಣರ ಕಾಯುವಿಕೆ (ಸುಗ್ರೀವನೊಂದಿಗಿನ ಸ್ನೇಹದ ಒಪ್ಪಂದದ ಪ್ರಕಾರ ಸೀತೆಯ ಹುಡುಕಾಟಕ್ಕಾಗಿ), ಮತ್ತು ಮಳೆಗಾಲದಲ್ಲಿ ಪರ್ವತದ ಮೇಲಿನ ವಾಸ.
♦
ಕೋಪಂ ರಾಘವಸಿಂಹಸ್ಯ ಬಲಾನಾಮುಪಸಂಗ್ರಹಮ್
ದಿಶಃ ಪ್ರಸ್ಥಾಪನಂ ಚೈವ ಪೃಥಿವ್ಯಾಶ್ಚ ನಿವೇದನಮ್ ||3.26||
ಇನ್ನಷ್ಟು ಓದಿ......
ಶಬ್ದಾರ್ಥ: ಕೋಪಂ=ಕೋಪ; ರಾಘವ ಸಿಂಹಸ್ಯ=ಸಿಂಹದಂತಿಹ ರಾಮನ; ಬಲಾನಾಮ್ ಉಪಸಂಗ್ರಹಮ್=ಸೈನ್ಯಗಳ ಸಂಗ್ರಹ; ದಿಶಃ=ದಿಕ್ಕುಗಳ; ಪ್ರಸ್ಥಾಪನಂ=ಕಳಿಸುವದು; ಚ ಏವ=ಹಾಗೂ; ಪೃಥಿವ್ಯಾಃ=ಭೂಮಿಯ; ಚ=ಹಾಗೂ; ನಿವೇದನಮ್=ನಿವೇದನೆ;
ಅನುವಾದ: ಸುಗ್ರೀವನಿಂದ ಉಂಟಾದ ವಿಳಂಬಕ್ಕೆ ಸಿಂಹನಾದ ರಾಘವನ ಕೋಪ ಮತ್ತು ಸುಗ್ರೀವನು ಎಲ್ಲಾ ಸೈನ್ಯವನ್ನು ಒಟ್ಟುಗೂಡಿಸಿ ಎಲ್ಲಾ ಭಾಗಗಳಿಗೆ ಕಳುಹಿಸುವಿಕೆ ಮತ್ತು ಸುಗ್ರೀವನಿಂದ ವಾನರ-ಪಡೆಗಳಿಗೆ ಭೂಮಿಯ ಭೂಗೋಳದ ವಿವರಣೆ
♦
ಅಂಗುಲೀಯಕದಾನಂ ಚ ಋಕ್ಷಸ್ಯ ಬಿಲದರ್ಶನಮ್
ಪ್ರಾಯೋಪವೇಶನಂ ಚಾಪಿ ಸಂಪಾತೇಶ್ಚೈವ ದರ್ಶನಮ್||3.26||
ಇನ್ನಷ್ಟು ಓದಿ......
ಶಬ್ದಾರ್ಥ: ಅಂಗುಲೀಯಕದಾನಂ=ಉಂಗರುವನ್ನು ಕೊಡುವದು;ಚ=ಹಾಗೂ; ಋಕ್ಷಸ್ಯ ಬಿಲದರ್ಶನಮ್=ಕರಡಿಯ ಬಿಲದರ್ಶನ; ಪ್ರಾಯೋಪವೇಶನಂ=ಆಮರಣ ಉಪವಾಸ; ಚ ಅಪಿ=ಕೂಡ; ಸಂಪಾತೇಃ ಚ ಏವ ದರ್ಶನಮ್=ಸಂಪಾತಿಯ ದರ್ಶನ
ಅನುವಾದ:ರಾಮನಿಂದ ಉಂಗುರವನ್ನು ಕೊಡುವದು, ಋಕ್ಷ ಗುಹೆಯ ಅನ್ವೇಷಣೆ, ಆಮರಣಾಂತ ಉಪವಾಸ ಮಾಡುವ ಸಂಕಲ್ಪ ಮತ್ತು ಸಂಪಾತಿಯೊಂದಿಗಿನ ಭೇಟಿಯನ್ನು (ವಾಲ್ಮೀಕಿ ವಿವರಿಸಿದನು). (ಸಂಪಾತಿ ಜಟಾಯುವಿನ ಸೋದರ. ಅವನು ಅವರಿಗೆ ಸೀತೆಯನ್ನು ಇಟ್ಟರುವ ಸ್ಥಳಕ್ಕೆ ಕರೆದೊಯ್ಯುತ್ತಾನೆ)
♦
ಪರ್ವತಾರೋಹಣಂ ಚೈವ ಸಾಗರಸ್ಯ ಚ ಲಂಘನಮ್
ಸಮುದ್ರವಚನಾಚ್ಚೈವ ಮೈನಕಸ್ಯಾಪಿ ದರ್ಶನಮ್ ||3.27||
ಇನ್ನಷ್ಟು ಓದಿ......
ಶಬ್ದಾರ್ಥ: ಪರ್ವತಾರೋಹಣಂ=ಪರ್ವತವನ್ನು ಹತ್ತುವದು; ಚ ಏವ=ಕೂಡ; ಸಾಗರಸ್ಯ=ಸಾಗರದ; ಚ=ಹಾಗೂ; ಲಂಘನಂ=ಹಾರುವದು; ಸಮುದ್ರವಚನಾತ್=ಸಮುದ್ರದ ಮಾತಿನಂತೆ; ಚ ಏವ=ಹಾಗೂ; ಮೈನಕಸ್ಯ=ಮೈನಕ ಪರ್ವತದ; ದರ್ಶನಂ=ದರ್ಶನ;
ಅನುವಾದ:ಸಾಗರವನ್ನು ದಾಟಲು ಹನುಮನು ಮಹೇಂದ್ರ ಪರ್ವತವನ್ನು ಏರುವುದು, ಸಾಗರದ ಸಲಹೆಯ ಮೇರೆಗೆ ಹನುಮನಿಗೆ ವಿಶ್ರಾಂತಿ ನೀಡಲು ಮೈನಕ ಪರ್ವತವು ನೀರಿನೊಳಗಿಂದ ಮೇಲೆ ಬರುವುದು ಮತ್ತು ಹನುಮನು ಆ ಪರ್ವತವನ್ನು ನೋಡುವುದು
♦
ಸಿಂಹಿಕಾಯಾಶ್ಚ ನಿಧನಂ ಲಂಕಾ ಮಲಯದರ್ಶನಮ್
ರಾತ್ರೌ ಲಂಕಾಪ್ರವೇಶಂ ಚ ಏಕಸ್ಯಾಪಿ ವಿಚಿಂತನಮ್ ||3.28||
ಇನ್ನಷ್ಟು ಓದಿ......
ಶಬ್ದಾರ್ಥ:ಸಿಂಹಿಕಾಯಾಃ=ಸಿಂಹಿಕಾಳ; ನಿಧನಂ=ಸಾವು, ಹನುಮಂತನಿಂದ ವಧೆ; ಲಂಕಾ ಮಲಯದರ್ಶನಮ್=ಲಂಕಾ ಪರ್ವತವನ್ನು ನೋಡುವದು; ರಾತ್ರೌ=ರಾತ್ರಿಯಲ್ಲಿ; ಲಂಕಾಪ್ರವೇಶಂ=ಲಂಕೆಯ ಪ್ರವೇಶ; ಚ=ಹಾಗೂ; ಏಕಸ್ಯ=ಒಬ್ಬನೇ; ಅಪಿ=ಕೂಡ; ವಿಚಿಂತನಮ್=ಯೋಚಿಸುವದು
ಅನುವಾದ:ಸಿಂಹಿಕಾಳ ಹತ್ಯೆ, ಮಲಯ ಎತ್ತರದಿಂದ ಲಂಕೆಯ ದರ್ಶನ, ರಾತ್ರಿಯಲ್ಲಿ ಲಂಕ ಪ್ರವೇಶ, ಮತ್ತು ನಂತರ ಹನುಮಂತನಿಂದ ಏಕಾಂತ ವಿಚಾರ
♦
ದರ್ಶನಂ ರಾವಣಸ್ಯಾಪಿ ಪುಷ್ಪಕಸ್ಯ ಚ ದರ್ಶನಮ್
ಆಪಾನಭೂಮಿಗಮನಮವರೋಧಸ್ಯ ದರ್ಶನಮ್ ||3.29||
ಇನ್ನಷ್ಟು ಓದಿ......
ಶಬ್ದಾರ್ಥ:ದರ್ಶನಂ=ದರ್ಶನ; ರಾವಣಸ್ಯ=ರಾವಣನ; ಅಪಿ=ಕೂಡ; ಪುಷ್ಪಕಸ್ಯ ಚ ದರ್ಶನಂ=ಹಾಗೂ ಪುಷ್ಪಕ ವಿಮಾನದ ದರ್ಶನ; ಆಪಾನಭೂಮಿಗಮನಂ=ಮದ್ಯವಿರುವ ಕೊಠಡಿಗೆ ಹೋಗುವದು; ಅವರೋಧಸ್ಯ=ಅಂತಃಪುರದ; ದರ್ಶನಮ್=ದರ್ಶನ;
ಅನುವಾದ:ಹನುಮಂತನಿಂದ ರಾವಣನ ದರ್ಶನ ಮತ್ತು ಪುಷ್ಪಕದ ದರ್ಶನ, ಅವನು ಮದ್ಯವನ್ನು ಬಡಿಸುವ ಕೊಠದಡಿಯನ್ನು ತಲುಪುವುದು, ಅಂತಃಪುರವನ್ನು ನೋಡುವುದು.
♦
ಅಶೋಕವನಿಕಾಯಾನಂ ಸೀತಾಯಾಶ್ಚಾಪಿ ದರ್ಶನಮ್
ಅಭಿಜ್ಞಾನಪ್ರದಾನಂ ಚ ಸೀತಾಯಾಶ್ಚಾಪಿ ಭಾಷಣಮ್ ||3.30||
ಇನ್ನಷ್ಟು ಓದಿ......
ಶಬ್ದಾರ್ಥ: ಅಶೋಕವನಿಕಾಯಾನಂ=ಅಶೋಕವನಕ್ಕೆ ಪಯಣ; ಸೀತಾಯಾಃ=ಸೀತೆಯ; ಅಪಿ=ಕೂಡ; ದರ್ಶನಂ=ದರ್ಶನ; ಅಭಿಜ್ಞಾನಪ್ರದಾನಂ=ಗುರುತಿನ ದ್ಯೋತಕ ನೀಡುವದು; ಚ=ಹಾಗೂ; ಸೀತಾಯಾಃ=ಸೀತೆಯ; ಚ ಅಪಿ=ಕೂಡ; ಭಾಷಣಮ್=ಮಾತುಕತೆ
ಅನುವಾದ: ಹನುಮಂತನು ಅಶೋಕವನಕ್ಕೆ ಹೋಗುವದು, ಅಲ್ಲಿ ಅವನು ಸೀತೆಯನ್ನು ನೋಡುವದು, ಅವಳಿಗೆ ರಾಮನ ಉಂಗುರವನ್ನು ಕೊಡುವದು, ಅವಳ ಜೊತೆ ಮಾತುಕತೆ
♦
ರಾಕ್ಷಸೀತರ್ಜನಂ ಚೈವ ತ್ರಿಜಟಾಸ್ವಪ್ನದರ್ಶನಂ
ಮಣಿಪ್ರದಾನಂ ಸೀತಾಯಾ ವೃಕ್ಷಭಂಗಂ ತಥೈವ ಚ ||3.31||
ಇನ್ನಷ್ಟು ಓದಿ......
ಶಬ್ದಾರ್ಥ: ರಾಕ್ಷಸೀತರ್ಜನಂ=ರಾಕ್ಷಸಿಯನ್ನು ಹೆದರಿಸುವದು; ಚ ಏವ=ಹಾಗೂ; ತ್ರಿಜಟಾಸ್ವಪ್ನದರ್ಶನಂ=ತ್ರಿಜಟೆಯು ದುಃಸ್ವಪ್ನವನ್ನು ನೋಡುವದು;ಮಣಿಪ್ರದಾನಂ=ಮಣಿಯನ್ನು ಕೊಡುವದು; ಸೀತಾಯಾಃ=ಸೀತೆಯ; ವೃಕ್ಷಭಂಗಂ=ಮರಗಳನ್ನು ಮುರಿದುಹಾಕುವದು; ತಥಾ ಏವ ಚ=ಹಾಗೆಯೇ
ಅನುವಾದ: ಹನುಮಂತನಿಂದ ರಾಕ್ಷಸಿಯನ್ನು ಬೆದರಿಸುವದು, ತ್ರಿಜಟೆ ದುಸ್ವಪ್ನದ ಬಗ್ಗೆ ಹೇಳುವದು, ಸೀತೆಯು ಹನುಮಂತನಿಗೆ ಚೂಡಾಮಣಿಯನ್ನು ನೀಡುವುದು ಹಾಗೂ ಹನುಮಂತನು ಅಶೋಕ ವನದ ಮರಗಳನ್ನು ಮುರಿದುಹಾಕುವುದು.
♦
ರಾಕ್ಷಸೀವಿದ್ರವಂ ಚೈವ ಕಿಂಕರಾಣಾಂ ನಿಬರ್ಹಣಮ್
ಗ್ರಹಣಂ ವಾಯುಸೂನೋಶ್ಚ ಲಂಕಾದಾಹಾಭಿಗರ್ಜನಮ್||3.32||
ಇನ್ನಷ್ಟು ಓದಿ......
ಶಬ್ದಾರ್ಥ:ರಾಕ್ಷಸೀವಿದ್ರವಂ=ರಾಕ್ಷಸಿ ಓಡಿಹೋಗುವದು; ಚ ಏವ=ಹಾಗೂ; ಕಿಂಕರಾಣಾಂ=ಸೇವಕರ; ನಿಬರ್ಹಣಂ=ನಾಶ ಮಾಡುವದು; ಗ್ರಹಣಂ=ಸೆರೆಹಿಡಿಯುವಿಕೆ; ವಾಯುಸೂನೋಃ=ವಾಯುಪುತ್ರನ, ಹನುಮಂತನ; ಚ=ಹಾಗೂ; ಲಂಕಾದಾಹ=ಲಂಕೆಯ ದಹನ; ಅಭಿಗರ್ಜನಂ=ಗರ್ಜನೆ;
ಅನುವಾದ: ರಾಕ್ಷಸಿಯರ ಪಲಾಯನ, ರಾವಣನ ಸೇವಕರ ಹತ್ಯೆ, ಹನುಮಂತನ ಸೆರೆಹಿಡಿಯುವಿಕೆ ಮತ್ತು ಉಗ್ರ ಘರ್ಜನೆಯೊಂದಿಗೆ ಲಂಕೆಯನ್ನು ಹನುಮಂತ ಸುಡುವುದು.
♦
ಪ್ರತಿಪ್ಲವನಮೇವಾಥ ಮಧೂನಾಂ ಹರಣಂ ತಥಾ
ರಾಘಾವಾಶ್ವಾಸನಂ ಚೈವ ಮಣಿನಿರ್ಯಾತನಂ ತಥಾ ||3.33||
ಇನ್ನಷ್ಟು ಓದಿ......
ಶಬ್ದಾರ್ಥ: ಪ್ರತಿಪ್ಲವನಂ=ಹಿಂತಿರುಗಿ ಹಾರುವದು; ಏವ=ಕೂಡ; ಅಥ=ಹಾಗೆ; ಮಧೂನಾಂ=ಜೇನುತುಪ್ಪದ; ಹರಣಂ=ಕಿತ್ತುಕೊಳ್ಳುವದು; ತಥಾ=ಹಾಗೆ; ರಾಘವ ಆಶ್ವಾಸನಂ=ರಾಮನ ಆಶ್ವಾಸನೆ; ಚ ಏವ=ಹಾಗೂ; ಮಣಿನಿರ್ಯಾತನಂ=ಮಣಿಯನ್ನು ಕೊಡುವದು; ತಥಾ=ಹಾಗೆ;
ಅನುವಾದ:ಹನುಮಂತನು (ಸಮುದ್ರವನ್ನು ದಾಟಿ) ಹಿಂತಿರುಗಿ ಬರುವುದು, ಮಧುವಿನ ವನದಲ್ಲಿ ಅಲ್ಲಿನ ಜೇನನ್ನು ವಶಪಡಿಸಿಕೊಳ್ಳುವುದು, ರಾಘವನಿಗೆ (ರಾಮನಿಗೆ) ಸಮಾಧಾನ ಹೇಳುವುದು ಮತ್ತು ಆ ರತ್ನವನ್ನು(ಸೀತೆ ಕೊಟ್ಟಿರುವ) ತಲುಪಿಸುವುದು.
♦
ಸಂಗಮಂ ಚ ಸಮುದ್ರೇಣ ನಲಸೇತೋಶ್ಚ ಬಂಧನಮ್
ಪ್ರತಾರಂ ಚ ಸಮುದ್ರಸ್ಯ ರಾತ್ರೌ ಲಂಕಾವರೋಧನಮ್||3.34||
ಇನ್ನಷ್ಟು ಓದಿ......
ಶಬ್ದಾರ್ಥ: ಸಂಗಮಂ=ಸಂಗಮ; ಚ=ಹಾಗೂ; ಸಮುದ್ರೇಣ=ಸಮುದ್ರದಿಂದ; ನಲಸೇತೋಃ=ನಲಸೇತುವೆಯ; ಚ=ಹಾಗೂ; ಬಂಧನಮ್=ಕಟ್ಟುವಿಕೆ; ಪ್ರತಾರಂ=ದಾಟುವಿಕೆ; ಚ=ಹಾಗೂ; ಸಮುದ್ರಸ್ಯ=ಸಮುದ್ರದ; ರಾತ್ರೌ=ರಾತ್ರಿ; ಲಂಕಾ ಅವರೋಧನಮ್=ಲಂಕೆಯ ಮುತ್ತಿಗೆ;
ಅನುವಾದ:ಸಮುದ್ರದ ಜೊತೆ ಭೇಟಿ, ನಳನಿಂದ ಸಮುದ್ರಕ್ಕೆ ಸೇತುವೆಯ ನಿರ್ಮಾಣ, ಅವರೆಲ್ಲ ಸಮುದ್ರವನ್ನು ದಾಟುವದು ಹಾಗೂ ರಾತ್ರಿ ಅವರೆಲ್ಲ ಲಂಕೆಯನ್ನು ಮುತ್ತಿಗೆ ಹಾಕುವದು
♦
ವಿಭೀಷಣೇನ ಸಂಸರ್ಗಂ ವಧೋಪಾಯನಿವೇದನಮ್
ಕುಂಭಕರ್ಣಸ್ಯ ನಿಧನಂ ಮೇಘನಾದನಿಬರ್ಹಣಮ್ ||3.35||
ಇನ್ನಷ್ಟು ಓದಿ......
ಶಬ್ದಾರ್ಥ: ವಿಭೀಷಣೇನ=ವಿಭೀಷಣನಿಂದ; ಸಂಸರ್ಗಂ=ಭೇಟಿ; ವಧ ಉಪಾಯ=ಕೊಲ್ಲುವ ಉಪಾಯ; ನಿವೇದನಮ್=ಹೇಳುವದು; ಕುಂಭಕರ್ಣಸ್ಯ=ಕುಂಭಕರ್ಣನ; ನಿಧನಂ=ಸಾವು; ಮೇಘನಾದನಿಬರ್ಹಣಮ್=ಮೇಘನಾದನ ವಿನಾಶ
ಅನುವಾದ: ರಾವಣನ ತಮ್ಮನಾದ ವೀಭೀಷಣನು ಬಂದು ರಾಮನನ್ನು ಭೇಟಿಯಾಗುವದು, ರಾಮನಿಗೆ ರಾವಣನನ್ನು ಕೊಲ್ಲುವ ಉಪಾಯವನ್ನು ಹೇಳುವದು, ರಾವಣನ ತಮ್ಮ ಕುಂಭಕರ್ಣನ ಸಾವು ಹಾಗೂ ರಾವಣನ ಮಗನಾದ ಮೇಘನಾದನು ವಿನಾಶ
♦
ರಾವಣಸ್ಯ ವಿನಾಶಂ ಚ ಸೀತಾವಾಪ್ತಿಮರೇಃ ಪುರೇ
ವಿಭೀಷಣಾಭಿಷೇಕಂ ಚ ಪುಷ್ಪಕಸ್ಯ ದರ್ಶನಮ್ ||3.36||
ಇನ್ನಷ್ಟು ಓದಿ......
ಶಬ್ದಾರ್ಥ:ರಾವಣಸ್ಯ=ರಾವಣನ; ವಿನಾಶಂ=ವಿನಾಶ; ಚ=ಹಾಗೂ; ಸೀತಾ ಅವಾಪ್ತಿಮ್ = ಸೀತೆಯನ್ನು ಪಡೆಯುವದು; ಅರೇಃ ಪುರೇ=ವೈರಿಯ ಪುರದಲ್ಲಿ; ವಿಭೀಷಣ ಅಭಿಷೇಕಂ=ವೀಭೀಷಣನ ಪಟ್ಟಾಭಿಷೇಕ; ಚ=ಹಾಗೂ; ಪುಷ್ಪಕಸ್ಯ=ಪುಷ್ಪಕದ; ದರ್ಶನಮ್=ದರ್ಶನ
ಅನುವಾದ: ರಾವಣನ ವಿನಾಶ, ಸೀತೆಯನ್ನು ಲಂಕೆಯಿಂದ ಪಡೆಯುವದು ಹಾಗೂ ವಿಭೀಷಣನ ಪಟ್ಟಾಭಿಷೇಕ ಹಾಗೂ ಪುಷ್ಪಕ ವಿಮಾನದ ದರ್ಶನ (ಇವುಗಳನ್ನು ವಾಲ್ಮೀಕಿ ವಿವರಿಸಿದನು)
♦
ಅಯೋಧ್ಯಾಯಾಶ್ಚ ಗಮನಂ ಭರತೇನ ಸಮಾಗಮಮ್
ರಾಮಾಭಿಷೇಕಾಭ್ಯುದಯಂ ಸರ್ವಸೈನ್ಯವಿಸರ್ಜನಮ್ ||3.37||
ಇನ್ನಷ್ಟು ಓದಿ......
ಶಬ್ದಾರ್ಥ:ಅಯೋಧ್ಯಾಯಾಃ=ಅಯೋಧ್ಯೆಯ; ಚ=ಹಾಗೂ; ಗಮನಂ=ಹೋಗುವದು; ಭರತೇನ=ಭರತನೊಡನೆ; ಸಮಾಗಮಮ್=ಸಮಾಗಮ; ರಾಮ ಅಭಿಷೇಕ ಅಭ್ಯುದಯಂ=ರಾಮನ ಅಭಿಷೇಕದ ವೈಭವ; ಸರ್ವಸೈನ್ಯವಿಸರ್ಜನಮ್=ಎಲ್ಲ ಸೈನ್ಯಗಳ ವಿಸರ್ಜನೆ
ಅನುವಾದ:ಅಯೋಧ್ಯೆಗೆ ಪ್ರಯಾಣ, ಭರತನೊಂದಿಗಿನ ಪುನರ್ಮಿಲನ, ರಾಮನ ಸಂಭ್ರಮದ ಪಟ್ಟಾಭಿಷೇಕ, ಇಡೀ ಮಿತ್ರ ಸೈನ್ಯದ ವಿಸರ್ಜನೆ
♦
ಸ್ವರಾಷ್ಟ್ರರಂಜನಂ ಚೈವ ವೈದೇಹ್ಯಾಶ್ಚ ವಿಸರ್ಜನಮ್
ಅನಾಗತಂ ಚ ಯತ್ಕಿಂಚಿದ್ರಾಮಸ್ಯ ವಸುಧಾತಲೇ
ತಚ್ಚಕಾರೋತ್ತರೇ ಕಾವ್ಯೇ ವಾಲ್ಮಿಕಿರ್ಭಗವಾನೃಷಿಃ ||3.38||
ಇನ್ನಷ್ಟು ಓದಿ......
ಶಬ್ದಾರ್ಥ:ಸ್ವರಾಷ್ಟ್ರರಂಜನಂ=ಸ್ವರಾಷ್ಟ್ರದ - ಅಯೋಧ್ಯೆಯ ಜನರ ಹರ್ಷ; ಚ ಏವ=ಹಾಗೂ; ವೈದೇಹ್ಯಾಃ ಚ=ವೈದೇಹಿಯ; ವಿಸರ್ಜನಮ್=ದೂರ ಕಳಿಸುವದು; ಅನಾಗತಂ=ಭವಿಷ್ಯದ; ಚ=ಹಾಗೂ; ಯತ್ಕಿಂಚಿತ್=ಯಾವುದಾದರೂ; ರಾಮಸ್ಯ=ರಾಮನ; ವಸುಧಾತಲೇ=ಭೂಮಿಯ ಮೇಲೆ; ತತ್=ಅದನ್ನು; ಚಕಾರ=ಮಾಡಿದನು; ಉತ್ತರೇ=ಉತ್ತರ; ಕಾವ್ಯೇ=ಕಾವ್ಯದಲ್ಲಿ; ವಾಲ್ಮಿಕಿಃ ಭಗವಾವಾನ್ ಋಷಿಃ=ಭಗವಾನ್ ಋಷಿಯಾದ ವಾಲ್ಮೀಕಿಯು
ಅನುವಾದ:ರಾಮನ ಆಗಮನದಿಂದ ಅಯೋಧ್ಯೆಯ ಜನರ ಹರ್ಷ ಹಾಗೂ ಸೀತೆಯನ್ನು ದೂರ ಕಳಿಸುವದು; ಮತ್ತು ರಾಮನ ಯಾವುದೇ ಘಟನೆಗಳು ಭೂಮಿಯ ಮುಖದ ಮೇಲೆ ಇನ್ನೂ ಬರಬೇಕಾಗಿದ್ದವು-ಅವುಗಳನ್ನು ಸಹ ಪೂಜ್ಯ ಋಷಿ ವಾಲ್ಮೀಕಿ ನಂತರದ ಕವಿತೆಯಾದ ಉತ್ತರ-ಕಾಂಡದಲ್ಲಿ ರಚಿಸಿದ್ದಾರೆ.
ಇತಿ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ತೃತೀಯ ಸರ್ಗಃ

Comments

Popular posts from this blog

ಬಾಲಕಾಂಡ - ಸರ್ಗ ೧

ಬಾಲಕಾಂಡ - ಸರ್ಗ ೨